ಅಮ್ಮ ನನ್ನ ಕೈಬೆರಳಿದ್ದರೆ ನಿನ್ನ ಕೈನಲ್ಲಿ ಇಡೀ ದೇಹ ಸಂತಸದಲ್ಲಿ
ಅಮ್ಮ
ನಾವೆಲ್ಲರು ಹುಟ್ಟಿದಾಗ ಎಲ್ಲರೂ ಖುಷಿ ಪಡುತ್ತಾರೆ ಸತ್ತರೆ ದುಃಖಿಸುತ್ತರೆ ಆದರೆ ನಾವು ಹುಟ್ಟುವಾಗಲು ಅಮ್ಮ ನೋವಿನಿಂದ ಕಿರುಚುತ್ತಾಳೆ ನಾವು ಸತ್ತರೂ ಎಲ್ಲರಿಗಿಂತ ಹೆಚ್ಚು ನೂವು ಪಡುತ್ತಾಳೆ.
ಆದ್ದರಿಂದ ಈ ನನ್ನ ಮೊದಲ ಬ್ಲಾಗ್ ನಲ್ಲಿ ಅಮ್ಮನ ಬಗ್ಗೆ ಹೇಳಲು ಬಯಸುತ್ತೇನೆ.
ಅಮ್ಮನ ಮಡಿಲಲ್ಲಿ ಆಡುವ ಆಸೆ
ಅಮ್ಮ ಅಮ್ಮಾ ಹೀಗೆಂದು ಕೂಗಲು ಈಗ ಬಹಳ ನೂವಾಗುತ್ತದೆ.
ಏಕೆಂದರೆ ಈಗ ಅಮ್ಮ ಎಂದು ಕೂಗಿದರು ಕೇಳದಷ್ಟು ದೂರಾಗಿದಾರೆ ನನ್ನ ಅಮ್ಮ. ಈಗ ನನ್ನ ವಯಸ್ಸು 35 ದಾಟಿದರು ಅಮ್ಮನ ಮಡಿಲಲ್ಲಿ ಚಿಕ್ಕ ಮಗುವಿನಂತೆ ಆಡುವ ಆಸೆ.
ಅಮ್ಮ ನನ್ನ ಕೈಬೆರಳಿದ್ದರೆ ನಿನ್ನ ಕೈನಲ್ಲಿ ಇಡೀ ದೇಹ ಸಂತಸದಲ್ಲಿ
ಹೌದು ಅಮ್ಮ ನಾನು ಈಗ ನೆನೆಯುವ ನಿನಗೆ ನನ್ನ ಮೇಲಿದ್ದ
ಕಾಳಜಿ, ಪ್ರೀತಿ, ಹಾರೈಕೆ, ಇನ್ನು ಹೆಚ್ಚಿನ ಭಾವನೆಗಳನ್ನು ಈಗ ಯಾರೂ ತೋರಿಸಿದರು ನನಗೆ ಸಮಾಧಾನವಿಲ್ಲ. ಚಿಕ್ಕವನಿದ್ದಾಗ ಯಾವಾಗಲು ನನ್ನ ಕೈಬೆರಳು ನಿನ್ನ ಕೈನಲ್ಲಿ ಇದ್ದರೆ ನನ್ನ ಇಡೀ ದೇಹ ಸಂತಸದಲ್ಲಿ ಇರುತ್ತಿತ್ತು. ಆ ನಿನ್ನ ಒಂದೊಂದು ಕೈತುತ್ತು ಇಂದು ಮೃಷ್ಟಾನ್ನ ತಿಂದ್ರು ಹಸಿವು.
ಅಮ್ಮ ನಿನ್ನ ಬಗ್ಗೆ ಏನು ಬರೆಯಲಿ
ಅಮ್ಮಾ ನಿನ್ನ ಬಗ್ಗೆ ಬರೆಯಲು ಶುರು ಮಾಡಿದೆ ನನ್ನ ಮನಸ್ಸು ಬಿಡುತ್ತಿಲ್ಲ. ಮನಸ್ಸಿನಲ್ಲಿದ್ದ ನಿನ್ನ ನೆನಪೆಲ್ಲಾ ಕಣ್ಣ ನೀರಾಗುತ್ತಿದೆ. ಕಣ್ಣೀರನ್ನು ಒರೆಸಲು ನಿನ್ನ ಕೈಗಳನ್ನು ಕೊಡಮ್ಮ. ಅಮ್ಮ ನಿನ್ನ ಮಡಿಲಲ್ಲಿ ಮಲಗಿ ನನ್ನ ಜೀವನದ ಕಷ್ಟ ಸುಖ ನೋವು ನಲಿವು ಎಲ್ಲವನ್ನು ಮರೆತು ಚಿಕ್ಕ ಮಗುವಿನಹಾಗೆ ಆಡುವ ಆಸೆ.ಅಮ್ಮ ಅಮ್ಮಾ ಈ ಕೂಗು ನಿನಗೆ ಕೇಳುವುದೇ ?
ಅಮ್ಮ ನನ್ನ ಕೈಬೆರಳಿದ್ದರೆ ನಿನ್ನ ಕೈನಲ್ಲಿ ಇಡೀ ದೇಹ ಸಂತಸದಲ್ಲಿ
Reviewed by KANNADA AMRUTHA
on
December 09, 2018
Rating:
