ನಿಮ್ಮ ಟಿವಿಯಲ್ಲಿ ಕೇಬಲ್ ಕನೆಕ್ಷನ್ ಇದ್ದರೆ ತಪ್ಪದೇ ಇದನ್ನು ಓದಿ.

ಇಷ್ಟು ದಿನ ಆಗಿರೋ ಮೋಸಕ್ಕೆಲ್ಲ ಇಲ್ಲಿದೆ ಪರಿಹಾರ.

ಕನ್ನಡದ ಚಾನಲ್‌ಗಳು

ಕನ್ನಡ ಚಾನೆಲ್ಸ್


         ನಮಸ್ಕಾರ ಸ್ನೇಹಿತರೆ

                ಬಹಳಷ್ಟು dth ಸರ್ವೀಸ್ ಇದ್ದರು ಕೂಡ ಈಗಲೂ ಕೋಟ್ಯಾಂತರ ಜನ ಕೇಬಲ್ ಸರ್ವೀಸ್ ಹಾಕಿಸಿಕೂಂಡು ತಮ್ಮ ತಮ್ಮ ನೆಚ್ಚಿನ ಚಾನಲ್‌ನ್ನು ನೋಡುತ್ತಾ ಇದ್ದಾರೆ. ಆದರೆ ಈ ಕೇಬಲ್ ಟಿವಿ ಸರ್ವೀಸ್ ಗೆ ಒಂದು ನಿಗದಿತ ಬೆಲೆ ಇಲ್ಲ. ಒಂದೊಂದು ಜಾಗದಲ್ಲಿ ಒಂದೊಂದು ರೀತಿಯ ಶುಲ್ಕ ಇರುತ್ತದೆ.  ಒಂದು ಕಡೆ 200 ಇದ್ದರೆ ಇನ್ನೊಂದು ಕಡೆ 250, 300 ಹೀಗೆ ಇರುತ್ತದೆ. ಅದಕ್ಕೆ ಈಗ ಸರ್ಕಾರ
 ಕಡಿವಾಣ ಹಾಕಿದೆ.
                ಕಳೆದ ಕೆಲವು ತಿಂಗಳ ಹಿಂದೆ ಎಲ್ಲರೂ ಸೆಟ್ ಆಫ್ ಬಾಕ್ಸ್ ಹಾಕಿಸಬೇಕು ಎಂದು ಕಾನೂನು ಮಾಡಿದ್ದರು. ಅದಕ್ಕೂ ಮೊದಲು ಕೇಬಲ್ ನವರು ಗ್ರಾಹಕರ ಹತ್ತಿರ ಲೂಟಿ ಮಾಡುತ್ತಿದ್ದರು. ಅದೇ ಕಾರಣಕ್ಕೆ ಸರ್ಕಾರ ಸೆಟ್ ಆಫ್ ಬಾಕ್ಸ್ ಕಡ್ಡಾಯ ಮಾಡಲಾಗಿತ್ತು. ಈ ಕಾರಣದಿಂದ ಕೆಲವು ಗ್ರಾಹಕರು ಬೇರೆ ಬೇರೆ ಕಂಪೆನಿಯ ಡಿಟಿಎಚ್  ಹಾಕಿಸಿಕೂಂಡು ತಮಗಿಷ್ಟವಾದ ಚಾನಲ್‌ನ್ನು ನೋಡುತ್ತಿದ್ದರು.
              ಆದರೆ ಸೆಟ್ ಆಫ್ ಬಾಕ್ಸ್ ಹಾಕಿಸಿರುವರ ಮೇಲೆ ಕೇಬಲ್ ಮಾಫಿಯಾದ ಭ್ರಷ್ಟಾಚಾರ ಹೆಚ್ಚಾಗಿದೆ. ತಿಂಗಳಿಗೆ 200 ರಿಂದ 300 ರ ವರೆಗೆ ಕಟ್ಟಬೇಕು. ಕಟ್ಟದಿದ್ದರೆ ಕೇಬಲ್ ಕಟ್ ಮಡುತ್ತಾರೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಒಂದು ಒಳ್ಳೆಯ ಆದೇಶ ಹೊರಡಿಸಿದೆ.
              ಅದೇನೆಂದರೆ 100 ಚಾನಲ್‌ನ್ನು ಹಾಕಿಸಿದರೆ 130 ರೂಪಾಯಿ ಪಡೆಯಬೇಕು. ಅದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ರವರು ಹೇಳಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕೇಬಲ್ ಸಂಪರ್ಕಕ್ಕೆ ದರ ನಿಗದಿ ಪಡಿಸಿ ನಿರ್ಣಯ ಕೈಗೊಂಡಿದೆ. ಹಾಗಾಗಿ 100 ಕಿಂತ ಹೆಚ್ಚು 25 ಚಾನಲ್‌ನ್ನು ಹಾಕಿಸಿದರೆ ಹೆಚ್ಚುವರಿ ಯಾಗಿ 20 ರೂಪಾಯಿ ಮಾತ್ರ ಪಡೆಯಬೇಕು ಎಂದು ತಿಳಿಸಿದೆ.
             ಹಾಗಾಗಿ ಇನ್ನು ಮುಂದೆ ಕೇಬಲ್ ನ 100 ಚಾನೆಲ್ ಗೆ 130 ಮತ್ತು 25 ಚಾನೆಲ್ ಹೆಚ್ಚು ಹಾಕಿಸಿದರೆ 20 (130+20) ರೂಪಾಯಿ ಕೊಡಬೇಕು. ಕೇಬಲ್ ನವರು ಹೆಚ್ಚು ಹಣ ವಸೂಲಿ ಮಾಡಿದರೆ ನೀವು karcabletvchambersofcommerce@gmail.com  ಗೆ ದೂರು ನೀಡ ಬಹುದಾಗಿದೆ.
            ok ಸ್ನೇಹಿತರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾಮೆಂಟ್ ಮೂಲಕ ತಿಳಿಸಿ. ಮತ್ತು ಎಲ್ಲರಿಗೂ ಶೇರ್ ಮಾಡಿ.

                                  ಧನ್ಯವಾದಗಳು 

ನಿಮ್ಮ ಟಿವಿಯಲ್ಲಿ ಕೇಬಲ್ ಕನೆಕ್ಷನ್ ಇದ್ದರೆ ತಪ್ಪದೇ ಇದನ್ನು ಓದಿ. ನಿಮ್ಮ ಟಿವಿಯಲ್ಲಿ ಕೇಬಲ್ ಕನೆಕ್ಷನ್ ಇದ್ದರೆ ತಪ್ಪದೇ ಇದನ್ನು ಓದಿ. Reviewed by KANNADA AMRUTHA on December 22, 2018 Rating: 5
Powered by Blogger.