ಜನವರಿ 8,9, ರಂದು ಬಂದ್ ಬಂದ್

ಜನವರಿ 8,9, ರಂದು ಬಂದ್ ಬಂದ್.
edited photo

ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ.

           ಹೊಸವರ್ಷ ಆರಂಭದಲ್ಲೇ ಜನರಿಗೆ ಒಂದಲ್ಲಾ ಎರಡು ದಿನದ ಬಂದ್ ಬಿಸಿ ತಟ್ಟಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9 ರಂದು ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಲಾಗಿದೆ. ಸಾರಿಗೆ ಸಂಸ್ಥೆಯು ಬಂದ್ ನಲ್ಲಿ ಪಾಲ್ಗೊಳ್ಳಲ್ಲಿದ್ದು ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ.
         
          ಮಂಗಳವಾರ ಮತ್ತು ಬುಧವಾರ ಎರಡೂ ದಿನವು ಸಂಪೂರ್ಣ ಸಾರಿಗೆ ಸಂಪರ್ಕ ಬಂದ್ ಆಗಲಿದ್ದು ನೀವು ಎಲ್ಲಿಗಾದರು ಪ್ರಯಾಣದ ತಯಾರಿಯಲ್ಲಿ ಇದ್ದರೆ ಬದಲಾವಣೆ ಅತ್ಯವಶ್ಯಕ. ಆ ಎರಡೂ ದಿನಗಳಲ್ಲಿ ಯಾವುದೇ ಬಸ್ ಆಟೋರಿಕ್ಷಾ ಕ್ಯಾಬ್ ನ ಸಂಚಾರ ಇರುವುದಿಲ್ಲ.
         
           ಶಾಲಾ ಕಾಲೇಜುಗಳ ರಜೆಯ ಬಗ್ಗೆ  ಪರಿಸ್ಥಿತಿ ನೋಡಿ ನಿರ್ಧಾರ ತೆಗೆದುಕೂಳ್ಳಲಾಗುತ್ತದೆ. ಬ್ಯಾಂಕ್ ಗಳು ಎರಡೂ ದಿನ ಸ್ಧಬ್ದವಾಗಲಿದ್ದು ಎರಡೂ ದಿನ ಎಲ್ಲ ರೀತಿಯ ಬ್ಯಾಂಕ್ ವ್ಯವಹಾರಗಳು ಬಂದ್. ಇನ್ನೂ ಎಂದಿನಂತೆ ಅವಶ್ಯಕ ವಸ್ತುಗಳು ಮತ್ತು ಆಸ್ಪತ್ರೆ ಮೆಡಿಕಲ್ ಸ್ಟೋರ್ ಗಳು ತೆರೆದಿರುತ್ತವೆ.
         
           ಇನ್ನು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್  ನ  ಮುಖ್ಯ ಬೇಡಿಕೆಗಳು ಏನೆಂದು ನೋಡುವುದಾದರೆ

  1. ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನ 18ಸಾವಿರ ನಿಗದಿ ಪಡಿಸಬೇಕು.
  2. ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಕೂಡಲೇ ನಿಷೇಧಿಸಬೇಕು.
  3. ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಮಿಕ ಕಾಯ್ದೆಯ ತಿದ್ದುಪಡಿ ಬೇಡ. 

          ಹೀಗೆ ಇನ್ನೂ ಹಲವು ಬೇಡಿಕೆಗಳ ಈಡೇರಿಕೆಗೆ ಬಂದ್ ಗೆ ಕರೆ ನೇಡಲಾಗಿದೆ. ಈ ವಿಷಯವನ್ನು ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ. 

                                     ಧನ್ಯವಾದಗಳು 

               
       
ಜನವರಿ 8,9, ರಂದು ಬಂದ್ ಬಂದ್ ಜನವರಿ 8,9, ರಂದು ಬಂದ್ ಬಂದ್ Reviewed by KANNADA AMRUTHA on January 06, 2019 Rating: 5
Powered by Blogger.