ಕೋಳಿಜ್ವರ ಆಯಿತು ಹಂದಿಜ್ವರ ಆಯಿತು ಈಗ ಮಂಗನ ಕಾಯಿಲೆ.
ಕೋಳಿಹಂದಿಜ್ವರ ಆಯಿತು ಈಗ ಮಂಗನ ಕಾಯಿಲೆ.
![]() |
ಮಂಗನ ಕಾಯಿಲೆ |
ಹೌದು ಸ್ನೇಹಿತರೆ :-
ಕೆಲವು ದಿನಗಳ ಹಿಂದೆ ಕೋಳಿಜ್ವರ ಬಂದು ತುಂಬಾ ಜನರ ಬಲಿ ತೆಗೆದುಕೊಂಡಿತ್ತು. ಹಾಗೆಯೇ ಹಂದಿಜ್ವರವೂ ಸಾಕಷ್ಟು ಜನರ ಸಾವಿಗೆ ಕಾರಣವಾಗಿತ್ತು. ಈಗ ಮಂಗನ ಕಾಯಿಲೆಯ ಸರದಿ.ಮಂಗನ ಕಾಯಿಲೆ :-
ಕ್ಯಾಸಣೂರ್ ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಎಂದು ಇದನ್ನು ಕರೆಯುತ್ತಾರೆ. ಈ ಕಾಯಿಲೆಯು1957 ರಲ್ಲಿ ಶಿವಮೊಗ್ಗದಲ್ಲಿ ಮೊದಲು ಕಾಣಿಸಿಕೊಂಡಿತ್ತು. ಈ ಕಾಯಿಲೆಗೆ ಕಾರಣವಾದ ವೈರಸ್‌ಗಳು ಮೊದಲ ಬಾರಿಗೆ ಕ್ಯಾಸಣೂರ್ ಕಾಡಿನಲ್ಲಿ ಗುರಿತಿಸಿಕೂಂಡದ್ದಕ್ಕೆ ಇದನ್ನು ಕ್ಯಾಸಣೂರ್ ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗಿದೆ. ಮತ್ತು ಇದು ಕೋತಿಗಳಿಗೆ ಹೆಚ್ಚು ಹರಡುವ ಕಾಯಿಲೆ ಆದ್ದರಿಂದ ಮಂಗನ ಕಾಯಿಲೆ ಎಂದು ಕರೆಯುತ್ತಾರೆ.
9 ಮಂದಿ ಸಾವು :-
ಪ್ರತಿ ವರ್ಷ ಈ ಕಾಯಿಲೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಅತಿ ಬೇಗನೇ ಕಾಣಿಸಿಕೊಂಡು ಶಿವಮೊಗ್ಗ ಜಿಲ್ಲೆಯಲ್ಲಿಯೇ 9 ಜನರ ಬಲಿ ತೆಗೆದುಕೊಂಡಿದೆ. ಅಂದಹಾಗೆ ಮಂಗನಿಂದ ಮಾನವ ಎನ್ನುವಂತೆ ಈ ಕಾಯಿಲೆ ಸತ್ತ ಮಂಗಗಳ ಚರ್ಮದ ಉಣ್ಣೆಗಳಿಂದ ಹರಡುತ್ತದೆ. ಇದು ಸಾಂಕ್ರಾಮಿಕ ರೋಗವಾದ ಕಾರಣ ಎಲ್ಲೆಡೆ ಹರಡುವ ಭೀತಿ ಎದುರಾಗಿದೆ.ಮಂಗನ ಕಾಯಿಲೆಯ ಲಕ್ಷಣಗಳು :-
ಜ್ವರ, ವಾಂತಿ, ಅತಿಸಾರ ಬೇಧಿ, ಮತ್ತು ರಕ್ತಸ್ರಾವ ಈ ಕಾಯಿಲೆಯ ಪ್ರಮುಖ ಲಕ್ಷಣಗಳು. ಆದ್ದರಿಂದ ಈ ಲಕ್ಷಣಗಳು ಯಾರಿಗಾದರೂ ಕಂಡುಬಂದರೆ ನಿರ್ಲಕ್ಷ್ಯ ತೋರದೆ ತಕ್ಷಣ ವೈದ್ಯರಿಗೆ ತೋರಿಸಿ. ಮತ್ತು ಈ ಕಾಯಿಲೆಯ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಆದ್ದರಿಂದ ಈ ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಎಲ್ಲರಿಗೂ ತಪ್ಪದೇ ಶೇರ್ ಮಾಡಿ. ಮತ್ತು ಈ ಲೇಖನದ ಕುರಿತು ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.ಧನ್ಯವಾದಗಳು
ಕೋಳಿಜ್ವರ ಆಯಿತು ಹಂದಿಜ್ವರ ಆಯಿತು ಈಗ ಮಂಗನ ಕಾಯಿಲೆ.
Reviewed by KANNADA AMRUTHA
on
January 05, 2019
Rating:
